Monday, June 28, 2010

ಆಡ್ತಾ ಆಡ್ತಾ...

One of my earliest memories are of my paternal grandmother telling me stories as she used to feed me my lunch at our house or during bedtime in Trichy. And one of the stories that she used to tell me has stuck with me and I can never forget it. Now, I narrate this story to Godha any time she asks for a story during dinner or at bedtime. And it has become one of her favourites too.

Here is the story in Kannada. Pardon my Kannada spelling mistakes (I never learnt Kannada reading/writing formally).

ಒಂದು ಊರಿನಲ್ಲಿ ಒಂದು ಗುಬ್ಬಚ್ಚಿ ಇತ್ತಂತೆ. ಅದು ಒಂದು ದಿನ ಊಟ ಹುಡುಕಿಕೊಂಡು ಕಾಡಿಗೆ ಹೋಯಿತಂತೆ. ಆ ಗುಬ್ಬಚ್ಚಿಗೆ ಆವತ್ತು ಆಡ್ತ ಆಡ್ತ ಆರು ಅಕ್ಕಿ ಕಾಳುಗಳು ಸಿಕ್ಕಿತಂತೆ. ಆ ಗುಬ್ಬಚ್ಚಿ ಬಹಳ ಜಾಣೆಯಂತೆ. ಅದಕ್ಕೆ ಅದು ಮೂರು ಅಕ್ಕಿ ಕಾಳನ್ನು ತಿಂದು, ಮೂರು ಕಾಳುಗಳನ್ನು ಮಾರನೆ ದಿನಕ್ಕೆ ತಿನ್ನೊಕ್ಕೆ ಅಂತ ಒಂದು ಮರದ ಗೂಡಿನಲ್ಲಿ ಇಟ್ಟುಬಿಟ್ಟು ಮನೆಗೆ ಹೋಯಿತಂತೆ.

ಆ ರಾತ್ರಿ ಕಾಡಿನಲ್ಲಿ ಜೋರಾಗಿ ಬಿರುಗಾಳಿ ಮಳೆಯಾಯಿತಂತೆ. ಮತ್ತೆ ಬೆಳ್ಳಗ್ಗೆ ಆ ಗುಬ್ಬಚ್ಚಿ ತನ್ನ ಮೂರು ಕಾಳು ಅಕ್ಕಿಯನ್ನು ಹುಡುಕಿಕೊಂಡು ಹೋದರೆ, ರಾತ್ರಿಯ ಮಳೆಬಿರುಗಾಳಿಯಿಂದ, ಆ ಅಕ್ಕಿಕಾಳು ಇಟ್ಟಿದ್ದ ಮರದ ಪೊಟ್ಟ್ರೆ ಕಲ್ಲು-ಮಣ್ಣಿನಿಂದ ಮುಚ್ಚಿ ಹೋಗಿತಂತೆ. ಪಾಪ ಗುಬ್ಬಚ್ಚಿಗೆ ತುಂಬ ಬೇಜಾರು ಆಯಿತಂತೆ.

ಹೇಗಾದರು ಮಾಡಿ ಆ ಮೂರು ಕಾಳು ಅಕ್ಕಿಯನ್ನು ತಿನ್ನಲೆ ಬೇಕು ಅಂತ, ಆ ಗುಬ್ಬಚ್ಚಿಯು ಒಂದು ಉಪಾಯವನ್ನು ಯೋಚಿಸಿತಂತೆ. ಹತ್ತಿರದ ಹಳ್ಳಿಗೆ ಹೋಗಿ, ಅಲ್ಲಿ ಇದ್ದ ಒಬ್ಬ ಕಮ್ಮಾರನಿಗೆ ಹೇಳಿತಂತೆ - "ಆಡ್ತ ಆಡ್ತ ಆರಕ್ಕಿ ತಂದೆ, ಮೂರಕ್ಕಿ ತಿಂದು ಮೂರಕ್ಕಿ ಮರದ ಪೊಟ್ಟ್ರೆಯಲ್ಲಿಟ್ಟೆ, ಹುಚ್ಚುಗಾಳಿ ಬಂದು ಮುಚ್ಚಿಕೊಂಡು ಹೋಯಿತು, ಕೆತ್ತಿಕೊಡು ಕಮ್ಮಾರನೇ". ಆದರೆ ಆ ಕಮ್ಮಾರನು ಈ ಗುಬ್ಬಚ್ಚಿಯ ಮಾತನ್ನು ಕೇಳಲಿಲ್ಲವಂತೆ.

ಗುಬ್ಬಚ್ಚಿಗೆ ಕೋಪಬಂತಂತೆ. ಅಲ್ಲಿನ ರಾಜನ ಅರಮನೆಗೆ ಹೋಯಿತಂತೆ. ರಾಜನಿಗೆ ಹೇಳಿತಂತೆ - "ಆಡ್ತ ಆಡ್ತ ಆರಕ್ಕಿ ತಂದೆ, ಮೂರಕ್ಕಿ ತಿಂದು ಮೂರಕ್ಕಿ ಮರದ ಪೊಟ್ಟ್ರೆಯಲ್ಲಿಟ್ಟೆ, ಹುಚ್ಚುಗಾಳಿ ಬಂದು ಮುಚ್ಚಿಕೊಂಡು ಹೋಯಿತು, ಕೆತ್ತಿಕೊಡದ ಕಮ್ಮಾರನ ಕಟ್ಟಿಕೊಲ್ಲು ಅರಸೇ". ಆದರೆ ಆ ಅರಸನು ಈ ಗುಬ್ಬಚ್ಚಿಯ ಮಾತನ್ನು ಕೇಳಲಿಲ್ಲವಂತೆ.

ಗುಬ್ಬಚ್ಚಿಗೆ ಮತ್ತೆ ಕೋಪಬಂತಂತೆ. ಒಂದು ಇಲಿಯನ್ನು ಹುಡುಕಿ ಅದಕ್ಕೆ ಹೇಳಿತಂತೆ - "ಆಡ್ತ ಆಡ್ತ ಆರಕ್ಕಿ ತಂದೆ, ಮೂರಕ್ಕಿ ತಿಂದು ಮೂರಕ್ಕಿ ಮರದ ಪೊಟ್ಟ್ರೆಯಲ್ಲಿಟ್ಟೆ, ಹುಚ್ಚುಗಾಳಿ ಬಂದು ಮುಚ್ಚಿಕೊಂಡು ಹೋಯಿತು, ಕೆತ್ತಿಕೊಡದ ಕಮ್ಮಾರನ ಕಟ್ಟಿಕೊಲ್ಲದ ಅರಸನ ಭಂಡಾರವನ್ನಿ ಕಚ್ಚು ಇಲಿಯೇ". ಆದರೆ ಆ ಇಲಿಯು ಈ ಗುಬ್ಬಚ್ಚಿಯ ಮಾತನ್ನು ಕೇಳಲಿಲ್ಲವಂತೆ.

ಗುಬ್ಬಚ್ಚಿಗೆ ಇಲಿಯಮೇಲೆ ಕೋಪಬಂತಂತೆ. ಆಲ್ಲೆ ಒಂದು ಬೆಕ್ಕು ಇತಂತೆ. ಆ ಬೆಕ್ಕಿಗೆ ಹೇಳಿತಂತೆ - "ಆಡ್ತ ಆಡ್ತ ಆರಕ್ಕಿ ತಂದೆ, ಮೂರಕ್ಕಿ ತಿಂದು, ಮೂರಕ್ಕಿ ಮರದ ಪೊಟ್ಟ್ರೆಯಲ್ಲಿಟ್ಟೆ, ಹುಚ್ಚುಗಾಳಿ ಬಂದು ಮುಚ್ಚಿಕೊಂಡು ಹೋಯಿತು, ಕೆತ್ತಿಕೊಡದ ಕಮ್ಮಾರನ ಕಟ್ಟಿಕೊಲ್ಲದ ಅರಸನ ಭಂಡಾರವ ಕಚ್ಚದ ಇಲಿಯನ್ನು ಕಚ್ಚು ಬೆಕ್ಕೇ". ಆ ಬೆಕ್ಕು ಈ ಗುಬ್ಬಚ್ಚಿಯ ಮಾತನ್ನು ಕೇಳಲಿಲ್ಲವಂತೆ.

ಮತ್ತೆ ಗುಬ್ಬಚ್ಚಿ ಓಂದು ನಾಯನ್ನು ಹುಡುಕಿತಂತೆ. ಆ ನಾಯಿಗೆ ಹೇಳಿತಂತೆ - "ಆಡ್ತ ಆಡ್ತ ಆರಕ್ಕಿ ತಂದೆ, ಮೂರಕ್ಕಿ ತಿಂದು, ಮೂರಕ್ಕಿ ಮರದ ಪೊಟ್ಟ್ರೆಯಲ್ಲಿಟ್ಟೆ, ಹುಚ್ಚುಗಾಳಿ ಬಂದು ಮುಚ್ಚಿಕೊಂಡು ಹೋಯಿತು, ಕೆತ್ತಿಕೊಡದ ಕಮ್ಮಾರನ ಕಟ್ಟಿಕೊಲ್ಲದ ಅರಸನ ಭಂಡಾರವ ಕಚ್ಚದ ಇಲಿಯ ಕಚ್ಚದ ಬೆಕ್ಕನ್ನು ಕಚ್ಚು ನಾಯೇ". ಆದರೆ ಆ ನಾಯು ಈ ಗುಬ್ಬಚಿಯ ಮಾತನ್ನು ಕೇಳಲಿಲ್ಲವಂತೆ.

ಅಲ್ಲಿ ಒಬ್ಬಳು ಅಜ್ಜಿ ಇದ್ದಳಂತೆ. ಈ ಗುಬ್ಬಚ್ಚಿ ಆ ಅಜ್ಜಿಗೆ ಹೇಳಿತಂತೆ - "ಆಡ್ತ ಆಡ್ತ ಆರಕ್ಕಿ ತಂದೆ, ಮೂರಕ್ಕಿ ತಿಂದು, ಮೂರಕ್ಕಿ ಮರದ ಪೊಟ್ಟ್ರೆಯಲ್ಲಿಟ್ಟೆ, ಹುಚ್ಚುಗಾಳಿ ಬಂದು ಮುಚ್ಚಿಕೊಂಡು ಹೋಯಿತು, ಕೆತ್ತಿಕೊಡದ ಕಮ್ಮಾರನ ಕಟ್ಟಿಕೊಲ್ಲದ ಅರಸನ ಭಂಡಾರವ ಕಚ್ಚದ ಇಲಿಯ ಕಚ್ಚದ ಬೆಕ್ಕ ಕಚ್ಚದ ನಾಯಿಯಮೇಲೆ ಬಿಸಿಗಂಜಿ ಸುರಿ ಆಜ್ಜಿಯೇ". ಆ ಅಜ್ಜಿಯು ಇ ಗುಬ್ಬಚ್ಚಿ ಮಾತನ್ನು ಕೇಳಲಿಲ್ಲವಂತೆ.

ಆ ಗುಬ್ಬಚ್ಚಿ ಕೋಪದಲ್ಲಿ, ಆ ಅಜ್ಜಿಯ ಮನೆಯ ಹಸುವಿಗೆ ಹೋಗಿ ಹೇಳಿತಂತೆ - "ಆಡ್ತ ಆಡ್ತ ಆರಕ್ಕಿ ತಂದೆ, ಮೂರಕ್ಕಿ ತಿಂದು, ಮೂರಕ್ಕಿ ಮರದ ಪೊಟ್ಟ್ರೆಯಲ್ಲಿಟ್ಟೆ, ಹುಚ್ಚುಗಾಳಿ ಬಂದು ಮುಚ್ಚಿಕೊಂಡು ಹೋಯಿತು, ಕೆತ್ತಿಕೊಡದ ಕಮ್ಮಾರನ ಕಟ್ಟಿಕೊಲ್ಲದ ಅರಸನ ಭಂಡಾರವ ಕಚ್ಚದ ಇಲಿಯ ಕಚ್ಚದ ಬೆಕ್ಕ ಕಚ್ಚದ ನಾಯಿಯಮೇಲೆ ಬಿಸಿಗಂಜಿ ಸುರಿಯದ ಅಜ್ಜಿಯ ತಿವಿ ಹಸುವೇ". ಆ ಹಸುವು ಗುಬ್ಬಚ್ಚಿಯ ಮಾತನ್ನು ಗಮನಿಸಲಿಲ್ಲವಂತೆ.

ಅಲ್ಲೆ ಪಕ್ಕದಲ್ಲಿ ಆ ಹಸುವಿನ ಕರುವಿತಂತೆ. ಈ ಗುಬ್ಬಚ್ಚಿ ಆ ಕರುವಿಗೆ ಹೇಳಿತಂತೆ - "ಆಡ್ತ ಆಡ್ತ ಆರಕ್ಕಿ ತಂದೆ, ಮೂರಕ್ಕಿ ತಿಂದು, ಮೂರಕ್ಕಿ ಮರದ ಪೊಟ್ಟ್ರೆಯಲ್ಲಿಟ್ಟೆ, ಹುಚ್ಚುಗಾಳಿ ಬಂದು ಮುಚ್ಚಿಕೊಂಡು ಹೋಯಿತು, ಕೆತ್ತಿಕೊಡದ ಕಮ್ಮಾರನ ಕಟ್ಟಿಕೊಲ್ಲದ ಅರಸನ ಭಂಡಾರವ ಕಚ್ಚದ ಇಲಿಯ ಕಚ್ಚದ ಬೆಕ್ಕ ಕಚ್ಚದ ನಾಯಿಯಮೇಲೆ ಬಿಸಿಗಂಜಿ ಸುರಿಯದ ಅಜ್ಜಿಯ ತಿವಿಯದ ಹಸುವ ಮೊಲೆಯನ್ನು ಕಚ್ಚು ಕರುವೇ".

ಕೊನೇಗೆ, ಆ ಕರುವಿಗೆ ಈ ಗುಬ್ಬಚ್ಚಿಮೇಲೆ ಕರುಣೆ ಬಂತು. ಅದು ತನ್ನ ತಾಯಿಯಾದ ಆ ಹಸುವಿನ ಮೊಲೆಯನ್ನು ಕಚ್ಚೊಕ್ಕೆ ಹೋಯಿತಂತೆ. ಆ ಹಸುವು ಹೆದರಿ, ಆ ಅಜ್ಜಿಯನ್ನಿ ತಿವಿಯಲ್ಲು ಹೋಯಿತಂತೆ. ಆ ಅಜ್ಜಿಯು ಹೆದರಿ, ಆ ನಾಯಿಯಮೇಲೆ ಬಿಸಿಗಂಜಿ ಸುರಿಯಲು ಹೊರಟಲಂತೆ. ಅದಕ್ಕೆ ಹೆದರಿ, ಆ ನಾಯಿಯು ಆ ಬೆಕ್ಕನ್ನು ಕಚ್ಚಲು ಓಡಿತಂತೆ. ಅದನ್ನು ಕಂಡು, ಆ ಬೆಕ್ಕು, ಆ ಇಲಿಯನ್ನು ಹೆದರಿಸಿತಂತೆ. ಆಗ, ಆ ಇಲಿಯು, ರಾಜನ ಭಂಡಾರವನ್ನು ನಾಶಮಾಡಲು ಹೊರಟಿತಂತೆ. ಆ ರಾಜ ತನ್ನ ಭಂಡಾರವನ್ನು ಕಾಪಾಡಲು, ಕಮ್ಮಾರನನ್ನು ಕಟ್ಟಿತರಲು ಆದೇಶ ಕೊಟ್ತನಂತೆ. ಅದಕ್ಕೆ ಹೆದರಿ, ಕಮ್ಮಾರನು ಕೂಡಲೆ ಗುಬ್ಬಚ್ಚಿಯ ಜೊತೆ ಕಾಡಿಗೆ ಹೋಗಿ, ಆ ಮರದ ಪೊಟ್ಟ್ರೆಯನ್ನು ಕೆತ್ತಿ ಕೊಟ್ಟನಂತೆ.

ಗುಬ್ಬಚ್ಚಿ ಸಂತೋಷದಿಂದ ತನ್ನ ಮೂರುಕಾಳು ಅಕ್ಕಿಯನ್ನು ತಿಂದು ತನ್ನ ಮನೆಗೆ ಹಾರಿಕೊಂಡು ಹೋಯಿತಂತೆ.

ಕಥೆ ಕಾಡಿಗೆ ಹೋಯಿತು, ನಾವು ನಾಡಿಗೆ ಬಂದೆವು!!!!!

So much for the sake of 3 grains of rice :-) What is nice about this story is that it kind of lulls the kids into sleep because of the repetitive strain the story going "ಆಡ್ತ ಆಡ್ತ...". My parents tell me that for a long time, I had never heard the whole thing as I would fall asleep somewhere in the middle.

And in the story my grandmother told me, the sparrow did not have a name. But Godha would never let me get ahead without giving the ಗುಬ್ಬಚ್ಚಿ a name. And so I asked her to suggest a name and she has named the sparrow ಸರಸ್ವತಿ/Saraswathi. An interesting name for the persistent sparrow!!!!

Some things to note:
  • The story teaches the value of saving (the sparrow saving 3 grains of rice for the next day)
  • The value of persistence (try try again)

p.s.: When I find the time, I will translate this into English.

1 comment:

  1. Please do translate to English, whenever you get time; I can narrate this to Sarnaya! :-)

    ReplyDelete